ಬಾಗ್ದಾದ್ (ಎಪಿ): ಇಸ್ಲಾಮಿಕ್ ಸ್ಟ್ರೇಟ್ ಉಗ್ರ ಸಂಘಟನೆ ಉತ್ತರ ಇರಾಕಿನ ಕಿರ್ಕುಕ್ ಪ್ರಾಂತ್ಯದ ಪಟ್ಟಣವೊಂದರಲ್ಲಿ ಎರಡು ರಾಸಾಯನಿಕ ದಾಳಿ ನಡೆಸಿದ್ದು, ಮೂರು ವರ್ಷದ ಹಸುಳೆಯೊಂದು ಮೃತಪಟ್ಟಿದೆ. ಕಿರ್ಕುಕ್‌ನ ದಕುಕ್ ಜಿಲ್ಲೆಯ ತಾಜಾ ಪಟ್ಟಣದಲ್ಲಿ ನಡೆದ ಘಟನೆಯಲ್ಲಿ ಸುಮಾರು 600 ಜನರು ಗಾಯಗೊಂಡಿದ್ದು, ನೂರಾರು ಜನರು ಊರು ತೊರೆದಿದ್ದಾರೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ. ‘ತಾಜಾ ನಗರದಲ್ಲಿ ನಡೆಸಿರುವ ಕೃತ್ಯಕ್ಕೆ ದಾಯೇಷ್ ಭಯೋತ್ಪಾದಕ ಸಂಘಟನೆಗಳನ್ನು ಸುಮ್ಮನೆ ಬಿಡುವುದಿಲ್ಲ. ದಾಳಿಯ ಸಂಚುಕೋರರು ಸಾಕಷ್ಟು ಬೆಲೆ ತೆರಲಿದ್ದಾರೆ’ ಎಂದು ಇರಾಕ್ ಪ್ರಧಾನಿ […]
↧