ಇಸ್ಲಾಮಾಬಾದ್ (ಪಿಟಿಐ): ಅನಿಲ ಸ್ಪೋಟದಿಂದ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ ಕನಿಷ್ಟ ಏಳು ಜನರು ಮೃತಪಟ್ಟು, 48 ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ಭಾನುವಾರ ನಡೆದಿದೆ. ಪಾಕ್‌ನ ಬುಡಕಟ್ಟು ಪ್ರದೇಶ ಒರಾಕಜೈ ಏಜೆನ್ಸಿಯಲ್ಲಿ ಈ ಅವಘಡ ನಡೆದಿದೆ. ಘಟನೆಯ ವೇಳೆ 65 ಕಾರ್ಮಿಕರು ಗಣಿಯೊಳಗೆ ಇದ್ದರು ಎಂದು ರಕ್ಷಣಾ ಕಾರ್ಯ ನಿರತ ತಂಡಗಳ ಮೂಲಗಳು ಹೇಳಿವೆ. 100ಕ್ಕೂ ಹೆಚ್ಚು ಸೇನಾ ಯೋಧರು ಹಾಗೂ ಪ್ರಾಂತೀಯ ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮೃತ ಹಾಗೂ ಗಾಯಗೊಂಡವರಲ್ಲಿ ಬಹುತೇಕರು […]
↧