ವಿದ್ಯುಚ್ಛಾಲಿತ ವಾಹನಗಳು ಸರಿಯಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚಿರುವಾಗ ಹಾರ್ಲಿ ಡೇವಿಡ್ಸನ್ ಏಕೆ ವಿದ್ಯುತ್ ಬೈಕ್ ಹೊರಬಿಟ್ಟಿದೆ ಎಂದು ಆಶ್ಚರ್ಯ ಆಗುವುದರಲ್ಲಿ ಅಸಹಜವಾದುದೇನೂ ಇಲ್ಲ. ಆದರೆ, ಹಾರ್ಲಿಗೆ ಚೆನ್ನಾಗಿ ಗೊತ್ತಿದೆ. ಭವಿಷ್ಯದ ವಾಹನಗಳು ವಿದ್ಯುಚ್ಛಾಲಿತವೇ ಎಂದು. ಅದಕ್ಕೇ ಭರವಸೆಯ ಉತ್ತಮ ಬೈಕ್ ಒಂದನ್ನು ನೀಡುವ ಪ್ರಯತ್ನವನ್ನು ಹಾರ್ಲಿ ಡೇವಿಡ್ಸನ್ ಮಾಡಿದ್ದು, ಅದರಲ್ಲಿ ಯಶಸ್ವಿಯೂ ಆಗಿದೆ. ಈ ಭರವಸೆಯನ್ನು ಹೀಗೆ ಸಮರ್ಥಿಸಿಕೊಳ್ಳಬಹುದು. ಈ ವಿದ್ಯುಚ್ಛಾಲಿತ ಬೈಕ್ ಗರಿಷ್ಠ 150 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಈ ವಿದ್ಯುತ್ಚ್ಛಾಲಿತ ಬೈಕ್ ಕನಿಷ್ಠ […]
↧