ಕರಾಚಿ/ದುಬೈ (ಪಿಟಿಐ): ವಿದೇಶಿ ಪ್ರಯಾಣದ ಮೇಲಿನ ನಿಷೇದವನ್ನು ಸರ್ಕಾರ ಹಿಂಪಡೆದ ಗಂಟೆಗಳಲ್ಲಿಯೇ ಪಾಕಿಸ್ತಾನ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಷರಫ್ ದುಬೈಗೆ ತೆರಳಿದ್ದಾರೆ. ದೇಶದ್ರೋಹ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಮುಷರಫ್ ಅವರ ವಿದೇಶಿ ಪ್ರವಾಸ ಮೇಲಿನ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಸೂಚನೆಯಂತೆ ಸರ್ಕಾರ ತೆರವು ಗೊಳಿಸಿತ್ತು. ಬೆನ್ನುಹುರಿ ನೋವಿನಿಂದ ಬಳಲುತ್ತಿರುವ ಮುಷರಫ್, ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ಪ್ರಯಾಣಿಸಿದ್ದಾರೆ. ‘ನಾನೊಬ್ಬ ಕಮಾಂಡೋ. ಸ್ವದೇಶವನ್ನು ಪ್ರೀತಿಸುತ್ತೇನೆ. ಕೆಲವು ವಾರ ಅಥವಾ ತಿಂಗಳುಗಳ ಬಳಿಕ ಮತ್ತೆ ಮರಳುತ್ತೇನೆ’ ಎಂದು ಮುಷರಫ್ ಹೇಳಿದ್ದಾರೆ. […]
↧