ಯಾಂಗೂನ್ (ಎಎಫ್ಪಿ): ಎರಡು ಪ್ರಮುಖ ಸಚಿವಾಲಯಗಳನ್ನು ನಿರ್ವಹಿಸುವ ಯೋಚನೆ ಕೈಬಿಟ್ಟಿರುವ ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ, ಇದೀಗ ಅಧ್ಯಕ್ಷರ ವಕ್ತಾರೆ ಪಾತ್ರವನ್ನು ನಿರ್ವಹಿಸಲಿದ್ದಾರೆ. ದಶಕಗಳ ಕಾಲ ಹೋರಾಡಿ ಮ್ಯಾನ್ಮಾರ್ನಲ್ಲಿ ಸೇನಾಡಳಿತ ಕೊನೆಗೊಳಿಸಿ ಪ್ರಜಾಪ್ರಭುತ್ವ ಜಾರಿಗೊಳಿಸುವಲ್ಲಿ ಸೂಕಿ ಅವರು ಪ್ರಮುಖ ಪಾತ್ರವಹಿಸಿದ್ದರು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅವರ ಪಕ್ಷ ಬಹುಮತ ಪಡೆದಿತ್ತು. ಆದರೆ, ಸೇನಾ ಸಂರಚಿತ ಸಂವಿಧಾನದಿಂದಾಗಿ ಅಧ್ಯಕ್ಷ ಹುದ್ದೆಗೇರುವ ಅವಕಾಶದಿಂದ ವಂಚಿತರಾಗಿದ್ದ ಸೂಕಿ, ಅಧ್ಯಕ್ಷರಿಗಿಂತಲೂ ‘ಉನ್ನತ’ ಪಾತ್ರವನ್ನು ನಿರ್ವಹಿಸುವ ಸುಳಿವು ನೀಡಿದ್ದರು. ಕಳೆದ ವಾರವಷ್ಟೇ […]
↧