ಹೌಸ್ಟನ್: ತಾಲಿಬಾನ್ ಉಗ್ರರು ಸಿದ್ಧಪಡಿಸಿದ್ದ ಆಪ್ಗೆ ಗೂಗಲ್ ತನ್ನ ಆಪ್ ಬಂಢಾರದಿಂದಲೇ ಕೊತ್ತೊಗೆಯುವ ಮೂಲಕ ಉಗ್ರವಾದವನ್ನು ಖಂಡಿಸುವುದಾಗಿ ಸಂದೇಶ ರವಾನೆಮಾಡಿದೆ. ಆಪ್ ಮೂಲಕ ಉಗ್ರ ವಿಚಾರಗಳು ಸಮಾಜಕ್ಕೆ ತಲುಪದಿರಲು ಈ ನಿರ್ಧಾರ ಕೈಗೊಂಡಿರುವುದಾಗಿ ಗೂಗಲ್ ಸಂಸ್ಥೆ ಸ್ಪಷ್ಟಪಡಿಸಿದೆ. ಶನಿವಾರ ಪ್ಲೇ ಸ್ಟೋರ್ ಮೂಲಕ ‘ಪಾಸ್ಥೋ ಆಫ್ಘನ್ ನ್ಯೂಸ್ – ಅಲೆಮೆರಾ’ ಎಂಬ ಆಪ್ ಸಿದ್ಧಪಡಿಸಿದ್ದ ತಾಲಿಬಾನ್ ಎರಡು ದಿನಗಳ ಹಿಂದೆ ಗೂಗಲ್ನಲ್ಲಿ ಪ್ರಚಾರ ಕಾರ್ಯಕ್ಕೆ ಇಳಿದಿತ್ತು. ತಾಲಿಬಾನಿಗಳು ತಮ್ಮ ಹಿಂಬಾಲಕರನ್ನು ಹೆಚ್ಚಿಸುವ ದುರುದ್ದೇಶದಿಂದ ಗೂಗಲ್ ಇಂಜಿನ್ನನ್ನೇ ವೇದಿಕೆಯನ್ನಾಗಿಸಿಕೊಂಡಿದ್ದರು. […]
↧