ಕ್ವಾಲಾಲಂಪುರ (ಪಿಟಿಐ): ಸರ್ಕಾರವನ್ನು ಮೂದಲಿಸುವ ಮಲೇಷ್ಯಾ ಪ್ರಜೆಗಳು ಇನ್ಮುಂದೆ ಮೂರು ವರ್ಷಗಳ ಕಾಲ ವಿದೇಶಿ ಪ್ರವಾಸ ಮಾಡದಂತೆ ನಿಷೇಧ ಎದುರಿಸಲಿದ್ದಾರೆ. ಸರ್ಕಾರಕ್ಕೆ ಅಗೌರವ ತೋರುವ ಅಥವಾ ಲೇವಡಿ ಮಾಡುವ ಪ್ರಜೆಗಳನ್ನು ವಿದೇಶಿ ಪ್ರವಾಸದಿಂದ ತಡೆಯಲು ಅವಕಾಶ ನೀಡುವ ಕಾನೂನು ಜಾರಿಗೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ‘ದೇಶದ ಇಮೇಜ್ ಸಂರಕ್ಷಣೆ’ಯೇ ಇದರ ಗುರಿ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಇಂಥ ನಿಬಂಧನೆ ಚಾಲ್ತಿಯಲ್ಲಿದೆ ಎಂದು ವಲಸೆ ಇಲಾಖೆಯ ಪ್ರಧಾನ ನಿರ್ದೇಶಕ ಶಕೀಬ್ ಕುಶ್ಮಿ ಅವರು ಇಮೇಲ್ ಮೂಲಕ ಪತ್ರಿಕೆಯೊಂದಕ್ಕೆ ಖಚಿತಪಡಿಸಿದ್ದಾರೆ. […]
↧