ಕೊಲಂಬೊ(ಪಿಟಿಐ): ಧ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮಳೆ ಮುಂದುವರಿದಿದ್ದು, ಪ್ರವಾಹ ಹಾಗೂ ಭೂಕುಸಿತದಿಂದಾಗಿ ಶುಕ್ರವಾರದವರೆಗೆ 63 ಜನ ಸಾವಿಗೀಡಾಗಿದ್ದು, 134 ಮಂದಿ ಕಾಣೆಯಾಗಿದ್ದಾರೆ. ಎರಡು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಚಾರಣೆ ನಡೆಯುತ್ತಿದ್ದು, ಮೂರು ಲಕ್ಷ ಜನರಿಗೆ ತಾತ್ಕಾಲಿಕ ವಸತಿ ಶಿಬಿರ ಕಲ್ಪಿಸಲಾಗಿದೆ. ಸೇನಾ ಸಿಬ್ಬಂದಿ ಎರಡು ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಬಿರುಗಾಳಿ, ಮಳೆ ಹಾಗೂ ಭೂಕುಸಿತದಿಂದ 350 ಮನೆಗಳು ನಾಶವಾಗಿವೆ ಎಂದು ವಿಪತ್ತು ನಿರ್ವಹಣ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳಿಂದ ಧಾರಾಕಾರ ಮಳೆ ಸುರಿದಿದ್ದು, […]
↧