ಢಾಕಾ(ಪಿಟಿಐ): ‘ರೋನು’ ಚಂಡಮಾರುತ ಶನಿವಾರ ಬಾಂಗ್ಲಾದೇಶದ ದಕ್ಷಿಣ ಕರಾವಳಿ ತೀರದಲ್ಲಿ ಗಾಳಿಯೊಂದಿಗೆ ಮಳೆ ಸುರಿಸುತ್ತಿದ್ದು, ಭೂಕುಸಿತ, ಮಳೆಗೆ ಐವರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಚಂಡಮಾರುತ ಚಿತ್ತಗಾಂಗ್ ಪ್ರದೇಶದ ಕರಾವಳಿ ತೀರದಲ್ಲಿ ಬಾಂಗ್ಲಾ ಪ್ರವೇಶಿಸಿದೆ. ಗಾಳಿ ಪ್ರತಿ ಗಂಟೆಗೆ ಒಂದು ಕಿ.ಮೀ. ವೇಗದಲ್ಲಿ ಬೀಸುತ್ತಿದೆ. ಬಹುತೇಕ ಕಡೆ ಬೆಳಿಗ್ಗೆಯಿಂದ ಮಳೆ ಬೀಳುತ್ತಿದೆ. ದಕ್ಷಿಣ ಕರಾವಳಿ ತೀರಕ್ಕೆ ಅಪ್ಪಳಿಸಿದ ರೋನು ಐವರನ್ನು ಬಲಿ ಪಡೆದು 100 ಮಂದಿಯನ್ನು ಗಾಯಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
↧