ದ್ವಿಪಕ್ಷೀಯ ವ್ಯಾಪಾರ- ವಹಿವಾಟುಗಳನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಮೇಕ್-ಇನ್-ಇಂಡಿಯಾ ಮತ್ತಿತರ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸಿ ಬಂಡವಾಳ ಹೂಡಿಕೆ ಮಾಡುವಂತೆ ಚೀನಾವನ್ನು ಒತ್ತಾಯಿಸಿರುವ ಭಾರತ ಹೂಡಿಕೆದಾರರಿಗೆ ಸಕಲ ನೆರವು ಮತ್ತು ರಕ್ಷಣೆ ಒದಗಿಸುವುದಾಗಿ ಭರವಸೆ ನೀಡಿದೆ. ನಾಲ್ಕು ದಿನಗಳ ಭೇಟಿಗೆಂದು ಚೀನಾಕ್ಕೆ ಆಗಮಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದಿಲ್ಲಿ ಆಯೋಜಿಸಿದ್ದ ಭಾರತ-ಚೀನಾ ಔದ್ಯಮಿಕ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನೀವು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವುದಾದರೆ ನಾವು ನಿಮಗೆ ಅಗತ್ಯವಾದ ಎಲ್ಲ ನೆರವುಗಳನನ್ನೂ ನೀಡಲು ಬದ್ಧರಾಗಿದ್ದೇವೆ ಎಂದರು. […]
↧