ಒಲಿಂಪಿಯಾ,ಮೇ 25- ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ರಾಜ್ಯದ ಪ್ರಾಥಮಿಕ ಮತ ಬೇಟೆಯಲ್ಲಿ ನಿರಾಯಾಸ ಗೆಲುವು ಸಾಧಿಸಿದ್ದು, ಇನ್ನು ನಾಮಪತ್ರ ಸಲ್ಲಿಕೆಗೆ ಒಂದೇ ಹೆಜ್ಜೆ ಬಾಕಿ ಉಳಿದಿದೆ. ನವೆಂಬರ್‍ನಲ್ಲಿ ನಡೆಯಲಿರುವ ಅಧ್ಯಕ್ಷರ ಚುನಾವಣೆಯಲ್ಲಿ ಶ್ವೇತಭವನ ಪ್ರವೇಶಕ್ಕೆ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್‍ಗೆ ಟ್ರಂಪ್ ಭಾರೀ ಪ್ರತಿರೋಧ ಒಡ್ಡುವುದು ಖಚಿತವಾದಂತಾಗಿದೆ. ವಾಷಿಂಗ್ಟನ್‍ನಲ್ಲಿ ಟ್ರಂಪ್ ಅವರಿಗೆ ಶೇ. 76.2 ಮತಗಳು ಬಂದಿವೆ. ಒಟ್ಟು 1,237 ಪ್ರಾಥಮಿಕ ಮತಗಳಲ್ಲಿ ಟ್ರಂಪ್ ಈಗಾಗಲೇ 1,229 ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.
↧