ಬ್ಯಾಂಕಾಕ್: ಥೈಲ್ಯಾಂಡ್ನ ದೇವಾಲಯವೊಂದರ ಫ್ರೀಜರ್ನಲ್ಲಿದ್ದ 40 ಹುಲಿಮರಿಗಳ ದೇಹವನ್ನು ಇಲ್ಲಿನ ವನ್ಯಜೀವಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹುಲಿ ದೇವಾಲಯ ಎಂದೇ ಪ್ರಸಿದ್ಧವಾಗಿರುವ ಕಾಂಚನಬುರಿಯಲ್ಲಿರುವ ಪ್ರವಾಸಿ ತಾಣವಾದ ಈ ಬೌದ್ಧ ದೇವಾಲಯದಲ್ಲಿ ಸಾಕಷ್ಟು ಹುಲಿಗಳಿದ್ದವು. ಇಲ್ಲಿಗೆ ಬರುವ ಭಕ್ತರು ಬಾಟಲಿ ಹಾಲು ಕುಡಿಯುತ್ತಿದ್ದ ಹುಲಿಮರಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪವೂ ಇತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ದೇವಾಲಯದ ಮೇಲೆ ದಾಳಿ ನಡೆಸಿದಾಗ ಫ್ರೀಜರ್ನಲ್ಲಿ ಹುಲಿಮರಿಗಳ ಮೃತದೇಹಗಳನ್ನು ಇಟ್ಟಿರುವುದು ಪತ್ತೆಯಾಯಿತು. ಸೋಮವಾರದಿಂದ […]
↧