ಪ್ರತಿಯೊಬ್ಬರ ಹೃದಯದಲ್ಲಿ ರಕ್ತನಾಳ ಇರುತ್ತದೆ. ದೊಡ್ಡ ರಕ್ತನಾಳದಿಂದಲೇ ನಮ್ಮ ಇಡಿ ಶರೀರಕ್ಕೆ ರಕ್ತ ಪೂರೈಕೆಯಾಗುತ್ತದೆ. ಹೀಗೆ ಶರೀರಕ್ಕೆ ರಕ್ತ ಪೂರೈಕೆ ಮಾಡುವ ನಾಳವನ್ನು ಆಯೋರ್ಟಾ ಟ್ಯೂಬ್ ಎಂದು ಕರೆಯಲಾಗುತ್ತದೆ. ಕೆಲವರಲ್ಲಿ ಈ ಟ್ಯೂಬ್ ಬಿರುಕು ಬಿಟ್ಟು ಹೊಡೆದು ಹೋದರೆ ಅದನ್ನು ವೈದ್ಯಕೀಯ ಭಾಷೆಯಲ್ಲಿ ಆಯೋರ್ಟಿಕ್ ಡಿಸಕ್ಷನ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ಆಯೋರ್ಟಾ ಟ್ಯೂಬ್ ಒಡೆದು ಹೋದಾಗ ಆ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿರಬಹುದು ಎಂದೇ ಭಾವಿಸಲಾಗುತ್ತದೆ. ಹಾರ್ಟ್ ಅಟ್ಯಾಕ್ ಆಗುವಾಗ ಸಂಭವಿಸಬಹುದಾದ ಎದೆನೋವು, ಆಘಾತಕಾರಿ ಬೆನ್ನುನೋವುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. […]
↧