ಬೈರೂತ್ (ಎಎಫ್‌ಪಿ): ದಕ್ಷಿಣ ಫ್ರಾನ್ಸ್‌ನ ನೀಸ್ ಕಡಲ ಕಿನಾರೆಯಲ್ಲಿ ನಡೆದಿರುವ ಹತ್ಯಾಕಾಂಡದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಹೊತ್ತುಕೊಂಡಿದೆ. ರಾಷ್ಟ್ರೀಯ ದಿನ ಆಚರಣೆಗೆ ಸೇರಿದ್ದ ಸಾವಿುರಾರು ಜನರ ಮೇಲೆ ವ್ಯಕ್ತಿಯೊಬ್ಬ ಮನಸೋ ಇಚ್ಛೆ ಲಾರಿ ಹರಿಸಿದ್ದರಿಂದ 84 ಮಂದಿ ಮೃತಪಟ್ಟಿದ್ದರು. ‘ನಮ್ಮ ಸೈನಿಕರು ನಡೆಸಿದ ಹತ್ಯಾಕಾಂಡ ಸಮ್ಮಿಶ್ರ ರಾಷ್ಟ್ರಗಳಿಗೆ ಎಚ್ಚರಿಕೆ’ ಎಂದು ಐಸ್‌ನ ಅಮಾಖ್ ಹೇಳಿಕೆ ಬಿಡುಗಡೆ ಮಾಡಿದ್ದಾನೆ.
↧