ಇಸ್ಲಾಮಾಬಾದ್: ಫೇಸ್ಬುಕ್`ನಲ್ಲಿ ಅಶ್ಲೀಲ ವಿಡಿಯೋ ಹಾಕಿದಳೆಂಬ ಕಾರಣಕ್ಕೆ ಪಾಕಿಸ್ತಾನದ ವಿವಾದಿತ ಮಾಡೆಲ್ ಖಂದಿಲ್ ಬಲೋಚ್ ಳನ್ನು ಕೊಂದ ಆಕೆಯ ಸೋಹದರನನ್ನು ಗುಂಡಿಕ್ಕಿ ಸಾಯಿಸಬೇಕು ಎಂದು ಖಂದಿಲ್ ತಂದೆ ಹೇಳಿದ್ದಾರೆ. ‘ಅವನಿಗೆ ಕಂಡಲ್ಲಿ ಗುಂಡಿಕ್ಕಿ ಸಾಯಿಸಬೇಕು. ಅವನು ನನ್ನ ಸಣ್ಣ ಮಗಳ ಉಸಿರು ನಿಲ್ಲಿಸಿದ’ ಎಂದು ಬಲೋಚ್ ತಂದೆ ಅನ್ವರ್ ಅಜೀಮ್ ಅವರು ಹೇಳಿದ್ದಾರೆ. ನ್ಯೂಸ್ ಇಂಟರ್ ನ್ಯಾಷಿನಲ್ ವರದಿ ಪ್ರಕಾರ, ತಮ್ಮ ಕಿರಿಯ ಪುತ್ರನೇ ತಮ್ಮ ಮಗಳ ಮರ್ಯಾದಾ ಹತ್ಯೆ ಮಾಡಿದ ಬಗ್ಗೆ ತಮ್ಮ ನೋವು ಹೇಳಿಕೊಂಡಿದ್ದಾರೆ. […]
↧