ಸೌದಿ ಅರೇಬಿಯಾ / ರಿಯಾದ್, ಜು.26: ಫಿಫಾ ಪರ್ವತದ ತುತ್ತ ತುದಿಯಂಚಿನಲ್ಲಿ ಸುಮಾರು 3,500 ಮೀಟರ್ ಎತ್ತರದ ಸ್ಥಳದಲ್ಲಿ ಅಪಾಯಕಾರಿಯಾಗಿ ನಿಂತಿದ್ದ ಒಬ್ಬ ವ್ಯಕ್ತಿ ಹಾಗೂ ಆತನ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಭಾರೀ ಸುದ್ದಿ ಮಾಡಿತ್ತು. ಸೌದಿ ಅರೇಬಿಯಾದ ಅಜೆಲ್ ದೈನಿಕ ಕೂಡ ಈ ಚಿತ್ರಗಳನ್ನು ಪ್ರಕಟಿಸಿತ್ತಲ್ಲದೆ, ಯುವಜನತೆಗೆ ಇಂತಹ ಅಪಾಯಕಾರಿ ಕೃತ್ಯಕ್ಕಿಳಿಯದಂತೆ ಎಚ್ಚರಿಕೆಯನ್ನೂ ನೀಡಿತ್ತು. ಸೌದಿ ಅರೇಬಿಯಾದಲ್ಲಿ ಇಂತಹ ಅಪಾಯಕಾರಿ ಸನ್ನಿವೇಶವನ್ನು ಪ್ರಕಟಿಸುವ ಚಿತ್ರವೊಂದು ವೈರಲ್ ಆಗಿದ್ದು ಇದೇ ಮೊದಲಲ್ಲ. ಅಪಾಯಕಾರಿ ಸ್ಟಂಟ್ […]
↧