ನವದೆಹಲಿ: ರಿಯೋ ಒಲಿಂಪಿಕ್ಸ್ನಲ್ಲಿ ಭಾರತ ಪದಕದ ಖಾತೆ ತೆರೆಯಲು ವಿಫಲವಾಗಿರುವುದಕ್ಕೆ ಮಾಜಿ ಶೂಟರ್ ಅಭಿನವ್ ಬಿಂದ್ರಾ ದೇಶದ ವ್ಯವಸ್ಥೆಯನ್ನು ದೂರಿದ್ದಾರೆ. ಒಂದೆಡೆ ಬ್ರಿಟನ್ ಪದಕಪಟ್ಟಿಯಲ್ಲಿ ಬಲಿಷ್ಠ ಚೀನಾವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಯಶಸ್ಸನ್ನು ಉಲ್ಲೇಖಿಸಿರುವ ಬಿಂದ್ರಾ, ಪ್ರತಿ ಪದಕಕ್ಕೆ ಬ್ರಿಟನ್ 48 ಕೋಟಿ ರೂ. ಖರ್ಚು ಮಾಡುತ್ತದೆ ಎಂದಿದ್ದಾರೆ. ರಿಯೋ ಅಥ್ಲೀಟ್ಗಳ ನಿರ್ವಹಣೆ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ನಡುವೆ ಬೀಜಿಂಗ್ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಶೂಟರ್ ಟ್ವಿಟರ್ನಲ್ಲಿ ಇದನ್ನು ಬರೆದಿದ್ದಾರೆ. ಅಲ್ಲದೆ, ನಮ್ಮ ವ್ಯವಸ್ಥೆಗಳು ಸರಿಯಾಗುವವರೆಗೂ […]
↧