ಅಂಕಾರಾ: ಮದುವೆ ಸಂಭ್ರಮದಲ್ಲಿರುವಾಗ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ಮೃತಪಟ್ಟು, 94ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ಗಾಜಿಯಾಂಟೆಪ್ ಪಟ್ಟಣದಲ್ಲಿ ನಡೆದಿದೆ. ಐಸಿಸ್ ಅಥವಾ ಕುರ್ದಿಶ್ ಉಗ್ರ ಸಂಘಟನೆ ಕೈವಾಡವಿರುವುದಾಗಿ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಈ ನಗರ ಸಿರಿಯಾ ಮತ್ತು ಟರ್ಕಿ ಗಡಿ ಪ್ರದೇಶದಲ್ಲಿರುವುದರಿಂದ ದಾಳಿಕೋರರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಉಪ ಪ್ರಧಾನಿ ಮೆಹಮತ್ ಸಿಂಸೆಕ್ ತಿಳಿಸಿದ್ದಾರೆ. ದಾಳಿಯಲ್ಲಿ ಸಾವನ್ನಪ್ಪಿದವರ ಮೃತದೇಹ ಬಿಳಿ ಪ್ಲಾಸ್ಟಿಕ್ ಹೊದಿಕೆಯಲ್ಲಿ […]
↧