ವಿಶ್ವದ ಎರಡು ಪ್ರಸಿದ್ಧ ಪೋರ್ನ್ ಸೈಟ್ಗಳಾದ ಪೋರ್ನ್ ಹಬ್ ಮತ್ತು ಯೂ ಪೋರ್ನ್ಗಳಿಗೆ ರಷ್ಯಾದಲ್ಲಿ ನಿಷೇಧ ಹೇರಲಾಗಿದೆ. ಇದರ ವಿರುದ್ಧ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ, ಇಷ್ಟಕ್ಕೆಲ್ಲಾ ಕಾರಣವಾದ ರಷ್ಯಾದ ಮಾಧ್ಯಮ ನಿಯಂತ್ರಕ ಸಂಸ್ಥೆ ಮಾತ್ರ ಜಪ್ಪಯ್ಯ ಅಂದರೂ ತನ್ನ ನಿರ್ಧಾರ ಬದಲಿಸಲು ನಿರಾಕರಿಸಿದೆ. ಅಶ್ಲೀಲ ಚಿತ್ರಗಳನ್ನು ಅಕ್ರಮವಾಗಿ ನಿರ್ಮಿಸುವುದು, ಅವುಗಳನ್ನು ಪ್ರಸಾರ ಮಾಡುವುದಕ್ಕೆ ರಷ್ಯಾದ ಕಾನೂನಿನಲ್ಲಿ ಅವಕಾಶವಿಲ್ಲ. ನಿಷೇಧಿತ ವೆಬ್ಸೈಟ್ಗಳು ಅಶ್ಲೀಲ ಸಂಗತಿ ಪ್ರಸಾರ ಮಾಡುತ್ತಿವೆ. ಹೀಗಾಗಿ ಅಧಿಕಾರಿಗಳ ಆದೇಶದಂತೆ ನಿಷೇಧವನ್ನು ಜಾರಿಮಾಡಲಾಗಿದೆ ಎಂದು […]
↧