ವಾಷಿಂಗ್ ಟನ್: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಸಂಕಷ್ಟ ಪ್ರಾರಂಭವಾಗಿರುವುದು ಸ್ಪಷ್ಟವಾಗಿದೆ. ಉರಿ ದಾಳಿ ಹಿನ್ನೆಲೆಯಲ್ಲಿ ಭಾರತದ ಮನವಿ ಮೇರೆಗೆ ರಷ್ಯಾ ಪಾಕಿಸ್ತಾನದೊಂದಿಗೆ ನಿಗದಿಯಾಗಿದ್ದ ಜಂಟಿ ಸೇನಾ ತಾಲೀಮನ್ನು ರದ್ದುಗೊಳಿಸಿದ ಬೆನ್ನಲ್ಲೇ ಅಮೆರಿಕ ಸಹ ಭಾರತದ ಬೆಂಬಲಕ್ಕೆ ನಿಂತಿದೆ. ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗರ ಉಂಟಾಗುವ ಸ್ಪಷ್ಟ ಸೂಚನೆ ಸಿಗುತ್ತಿದ್ದು, ಅಮೆರಿಕದ ಪ್ರಮುಖ ಸಂಸದರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆ ಉತ್ತೇಜಕ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟುವ ಮಸೂದೆಯನ್ನು […]
↧