ಢಾಕಾ: ಬಾಂಗ್ಲಾದೇಶದಲ್ಲಿ ಮೃಗಾಲಯವೊಂದರ ಸಿಬ್ಬಂದಿಗಳು 2 ಸಿಂಹಗಳಿಗೆ ಮದುವೆ ಮಾಡಿಸಿ ಅಚ್ಚರಿ ಮೂಡಿಸಿದ್ದಾರೆ. ಬಾಂಗ್ಲಾದೇಶದ ಚಿತ್ತಗಾಂಗ್‍ನ ಮೃಗಾಲಯವೊಂದರಲ್ಲಿ ಸಿಂಹಗಳಿಗೆ ಮದುವೆ ಏರ್ಪಡಿಸಲಾಗಿತ್ತು. ಇದಕ್ಕಾಗಿ ಹೃದಯದ ಆಕಾರದಲ್ಲಿ ಮಾಂಸದ ಕೇಕ್ ತಯಾರಿಸಲಾಗಿತ್ತು. ಮೃಗಾಲಯಕ್ಕೆ ಹೆಚ್ಚಿನ ಪ್ರವಾಸಿಗರು ಬರಲಿ ಎಂಬ ಕಾರಣಕ್ಕೆ ಹಾಗೂ ಸಿಂಹಗಳ ಮಿಲನಕ್ರಿಯೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಮದುವೆ ಪಾರ್ಟಿ ಏರ್ಪಡಿಸಲಾಗಿತ್ತು. ಇದೊಂದು ವಿನೂತನ ಪಾರ್ಟಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಮತ್ತಷ್ಟು ಮೆರುಗು ನೀಡಲು ಮೃಗಾಲಯದ ತುಂಬಾ ಅಲಂಕಾರ ಮಾಡಿ ಸಿಂಹ ಹಾಗೂ ಸಿಂಹಿಣಿಯ ಸ್ವಾಗತ […]
↧