ಪೌವಾಥೊಕ್, ಮೇ 4: ನೇಪಾಳದ ಪ್ರಬಲ ಭೂಕಂಪದಲ್ಲಿ ಬಹುತೇಕ ನೆಲಸಮವಾಗಿರುವ ಬೆಟ್ಟದ ಮೇಲಿನ ಈ ಹಳ್ಳಿಯ ಪ್ರವೇಶದ್ವಾರದಲ್ಲಿ ಮರದ ಹಲಗೆಗಳನ್ನು ಜೋಡಿಸಿ ನಿಲ್ಲಿಸಲಾದ ಫಲಕವೊಂದು ಎದ್ದು ಕಾಣಿಸುತ್ತದೆ. ‘ನಮಗೆ ಸಹಾಯ ಬೇಕು. ದಯವಿಟ್ಟು ನೆರವು ನೀಡಿ’ ಎಂಬ ಸಂದೇಶ ಅದರಲ್ಲಿದೆ. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪೂರ್ವಕ್ಕೆ ಕೇವಲ 50 ಕಿ.ಮೀ. ದೂರದಲ್ಲಿದೆ ಪೌವಾಥೊಕ್ ಎಂಬ ಸಣ್ಣ ಹಳ್ಳಿ. ಸಮುದ್ರಮಟ್ಟದಿಂದ 3,600 ಅಡಿ ಎತ್ತರದಲ್ಲಿರುವ ಈ ಹಳ್ಳಿಗೆ ತಲುಪಲು ಅಗಲಕಿರಿದಾದ ರಸ್ತೆ ಇದೆ. ವಾರದ ಹಿಂದೆ ಭೂಕಂಪ ಸಂಭವಿಸಿದ […]
↧