ಕಠ್ಮಂಡು/ಹೊಸದಿಲ್ಲಿ: ಭೂಕಂಪಪೀಡಿತ ನೇಪಾಳದಿಂದ ಹೊರ ತೆರಳುವಂತೆ ಭಾರತದ ರಾಷ್ಟ್ರೀಯ ದುರಂತ ಪರಿಹಾರ ಪಡೆ (ಎನ್‌ಡಿಆರ್‌ಎಫ್) ಸೇರಿದಂತೆ 34 ದೇಶಗಳ ರಕ್ಷಣಾ ಮತ್ತು ಪರಿಹಾರ ತಂಡಗಳಿಗೆ ನೇಪಾಳ ಸರಕಾರವು ಸೋಮವಾರ ಸೂಚನೆ ನೀಡಿದೆ. ಎಲ್ಲ ಬಗೆಯ ರಕ್ಷಣಾ ಕಾರ್ಯಾಚರಣೆಗಳು ಪೂರ್ಣಗೊಂಡಿವೆ. ಉಳಿದ ಕಾರ್ಯಾಚರಣೆಗಳನ್ನು ಸ್ವತಃ ನೇಪಾಳವೇ ನಿರ್ವಹಿಸುತ್ತದೆ. ನೇಪಾಳಕ್ಕೆ ಇನ್ನಷ್ಟು ನೆರವಿನ ಅಗತ್ಯವಿಲ್ಲ ಎಂದು ಸರಕಾರ ತಿಳಿಸಿದೆ. ಕಠ್ಮಂಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಮುಖ ರಕ್ಷಣಾ ಕಾರ್ಯಾಚರಣೆಗಳು ಮುಕ್ತಾಯವಾಗಿವೆ. ಉಳಿದಿರುವ ಕೆಲಸಗಳನ್ನು ಸ್ಥಳೀಯ ಕಾರ್ಮಿಕರು, ಕಾರ್ಯಕರ್ತರು ನಿರ್ವಹಿಸುತ್ತಾರೆ ಎಂದು […]
↧