ಮಾಸ್ಕೊ: ಜರ್ಮನಿಯ ಸರ್ವಾಧಿಕಾರಿ ಅಡಾಲ್ಪ್ ಹಿಟ್ಲರನ ನೇರ ಆದೇಶದ ಮೇರೆಗೆ ನಿರ್ಮಿಸಲಾಗಿದ್ದ ರಹಸ್ಯ ನಾಜಿ ನೆಲೆಯೊಂದನ್ನು ಉತ್ತರ ಧ್ರುವದಿಂದ 1000 ಕಿಮೀ ದೂರದಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ‘ಸ್ಕಾಟ್ಜ್ಗ್ರಾಬರ್’ ಅಥವಾ ‘ಟ್ರೆಜರ್ ಹಂಟರ್’ ಎಂದೇ ಪರಿಚಿತವಾಗಿದ್ದ ಆಕ್ಟಿಕ್ ಸರ್ಕಲ್ ಅಲೆಗ್ಸಾಂಡ್ರಾ ಲ್ಯಾಂಡಿನಲ್ಲಿದ್ದ ಈ ನಿಗೂಢ ನಿವೇಶನ ದಶಕಗಳ ಕಾಲ ಯಾರ ಗಮನಕ್ಕೂ ಬಂದಿರಲಿಲ್ಲ. ಪ್ರಸ್ತುತ ರಷ್ಯಾದ ಪ್ರದೇಶವಾಗಿರುವ ನಿರ್ಜನವಾದ ಪ್ರತ್ಯೇಕ ದ್ವೀಪದಲ್ಲಿ ನಿರ್ಮಿಸಲಾಗಿದ್ದ ಈ ನೆಲೆಯಲ್ಲಿ ಬಂಕರುಗಳ ಅವಶೇಷಗಳು, ಖಾಲಿ ಪೆಟ್ರೋಲ್ ಡಬ್ಬಗಳು ಮತ್ತು ಕಾಗದದ ದಾಖಲೆಗಳು […]
↧