ಅಲ್ಜೀರಿಯಾ :ಸ್ಕಿಕ್ಡಾ ಆಸ್ಪತ್ರೆಯೊಂದರ ವೈದ್ಯರ ತಂಡವು 73ರ ಹರೆಯದ ವೃದ್ಧೆಯೋರ್ವಳು ಕಳೆದ 35 ವರ್ಷಗಳಿಂದಲೂ ತನ್ನ ಉದರದಲ್ಲಿ ಮರಗಟ್ಟಿದ್ದ ಭ್ರೂಣವನ್ನು ಹೊತ್ತುಕೊಂಡಿದ್ದ ಅಪರೂಪದ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಅಂದ ಹಾಗೆ ಈ ಭ್ರೂಣದಿಂದ ವೃದ್ಧೆಗೆ ಯಾವುದೇ ತೊಂದರೆಯಾಗಿರಲಿಲ್ಲ. ಕಳೆದ ವಾರ ಅಸಾಧಾರಣವಾದ ಹೊಟ್ಟೆನೋವು ಕಾಣಿಸಿಕೊಳ್ಳುವವರೆಗೂ ಆಕೆ ಸಹಜ ಬದುಕನ್ನು ನಡೆಸಿದ್ದಳು. ಆಸ್ಪತ್ರೆಯಲ್ಲಿ ಆಕೆಯನ್ನು ತಪಾಸಣೆಗೊಳಪಡಿಸಿದ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ಎಕ್ಸರೇ ಸ್ಕಾನ್ ಆಕೆಯ ಉದರದಲ್ಲಿ ಪರಕೀಯ ವಸ್ತು ಇರುವುದನ್ನು ಬೆಟ್ಟುಮಾಡಿತ್ತು. ಮಹಿಳೆ ಕಳೆದ 35 ವರ್ಷಗಳಿಂದಲೂ ಎರಡು […]
↧