ಲಂಡನ್: ಸಾಮಾಜಿಕ ಜಾಲ ತಾಣಗಳಲ್ಲೇ ಸಂಗಾತಿ ಹೆಚ್ಚಿನ ಸಮಯ ಕಳೆಯುತ್ತಿರುವ ಕಾರಣ ನೀಡಿ ವಿಚ್ಛೇದನ ಪಡೆಯುತ್ತಿರುವ ಪ್ರವೃತ್ತಿ ಬ್ರಿಟನ್‌ನಲ್ಲಿ ಹೆಚ್ಚಿದೆ. ಸಂಗಾತಿಯ ಫೇಸ್‌ಬುಕ್, ಟ್ವಿಟರ್ ಗೀಳಿನಿಂದ ರೋಸಿ ಕೋರ್ಟ್ ಮೆಟ್ಟಿಲೇರುತ್ತಿರುವ ಪ್ರಕರಣಗಳು ಹೆಚ್ಚಿದ್ದು, ವೈವಾಹಿಕ ಸಂಬಂಧ ಹದಗೆಡಲು ಫೇಸ್‌ಬುಕ್ ಎಂಬ ವಿಲನ್ ಕಾರಣ ಎಂದು ಸ್ಲಾಟರ್ ಆ್ಯಂಡ್ ಗೋರ್ಡನ್ ವಕೀಲರು ನಡೆಸಿದ ಅಧ್ಯಯನ ಹೇಳಿದೆ. ‘ಐದು ವರ್ಷಗಳ ಹಿಂದೆ, ಮದುವೆ ಮುರಿದು ಬೀಳುವ ಸಂದರ್ಭದಲ್ಲಿ ಫೇಸ್‌ಬುಕ್ ಹೆಸರು ಪ್ರಸ್ತಾಪವಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅದೇ ಪ್ರಮುಖ ಕಾರಣವಾಗಿದೆ. […]
↧