ವಾಷಿಂಗ್ಟನ್: ಎರಡು ತಿಂಗಳಿಂದ ಮೆದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯ ಮೇಲೆ ಮಲಗಿದ್ದ 22 ವರ್ಷದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿ ಪ್ರಾಣ ತ್ಯಜಿಸಿದ್ದಾಳೆ. ಈ ಅಚ್ಚರಿಯನ್ನು ಸಾಧ್ಯವಾಗಿಸಿದ್ದು ವೈದ್ಯರ ಸತತ ಪರಿಶ್ರಮ. ಅಮೇರಿಕದ ನೆಬ್ರಸ್ಕಾ ನಿವಾಸಿಯಾಗಿರುವ 22 ವರ್ಷದ ಕಾರ್ಲಾ ಪೆರೆಜ್ ಪುಟ್ಟ ಹುಡುಗಿಯಾಗಿದ್ದಾಗಿನಿಂದಲೇ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಳು. ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಅವಳು ಮಗುವಿಗೆ ಜನ್ಮ ನೀಡುವುದು ಅಸಾಧ್ಯ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರು. ಆದರೆ ಮೂರು ವರ್ಷಗಳ ಹಿಂದೆ ಕಾರ್ಲಾ ಯಾವುದೇ ತೊಡಕಿಲ್ಲದೆ […]
↧