ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಪೌಲ್ ಕಲಾನಿಥಿಗೆ 36ರ ಹರೆಯ. ನ್ಯೂರೋಸರ್ಜನ್ ಆಗಿ ತರಬೇತಿ ಮುಗಿಸುತ್ತಿದ್ದ ಹೊತ್ತು. ಆಗ ಅವರಿಗೆ ಶ್ವಾಸಕೋಶದ ಕ್ಯಾನ್ಸರ್, ಅದೂ ನಾಲ್ಕನೇ ಹಂತ ತಲುಪಿದೆ ಎಂಬುದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆ ಸಾಧ್ಯವಿರಲಿಲ್ಲ. ಕಲಾನಿಥಿಯ ಸಾವು ಖಚಿತವಾಗಿತ್ತು. ಆಗ ಪೌಲ್ ಕಲಾನಿಥಿ ಏನು ಮಾಡಿದರು? ‘ವೆನ್ ಬ್ರೆಥ್ ಬಿಕಮ್್ಸ ಏರ್’ (ಉಸಿರು ಗಾಳಿಯಾದಾಗ) ಪುಸ್ತಕ ‘ಪೌಲ್ ಏನು ಮಾಡಿದರು‘ ಎಂಬುದನ್ನು ಬಿಚ್ಚಿಟ್ಟಿದೆ. ಸಾವು ಖಚಿತ ಎಂಬುದು ಗೊತ್ತಾದ ಬಳಿಕ ಅಂತಿಮ ಉಸಿರು ಇರುವವರೆಗೆ […]
↧