ಆರ್ಟಿಕ್ ಪ್ರದೇಶದಲ್ಲಿಯ ತಾಪಮಾನ ಏರಿಕೆ ಗಮನಿಸಿದರೆ ಮುಂದೊಂದು ದಿನ. ಆರ್ಟಿಕ್ ಸಾಗರದಲ್ಲಿ ಹಿಮ ಬಂಡೆಗಳೇ ಕಾಣಿಸುವುದಿಲ್ಲ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿಯ ತಾಪಮಾನದಲ್ಲಿಯ ಏರಿಕೆ ಹೀಗೆಯೇ ಮುಂದುವರೆದರೆ 2020ರ ವೇಳೆಗೆ ಆರ್ಟಿಕ್ ಸಾಗರದಲ್ಲಿ ಮಂಜುಗಡ್ಡೆಗಳು ಸಾಕಷ್ಟು ಮಾಯವಾಗುತ್ತವೆ. ಆರ್ಟಿಕ್ ಪ್ರದೇಶದಲ್ಲಿಯ ತಾಪಮಾನ ಏರಿಕೆ ಹಿಂದೆಂದಿಗಿಂತಲೂ ಇತ್ತೀಚಿನ ವರ್ಷಗಳಲ್ಲಿ ಕಳವಳಕಾರಿಯ ಮಟ್ಟದಲ್ಲಿದ್ದು, ಹಿಮ ಹೆಚ್ಚಿನ ಪ್ರಮಾಣದಲ್ಲಿ ಕರಗುವುದರಿಂದ ಸಾಗರದ ನೀರಿನ ಮಟ್ಟದಲ್ಲಿ ಏರಿಕೆಯಾಗುವುದಲ್ಲದೆ ಅಲ್ಲಿಯ ಜೀವ ಜಾಲದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಮೆರಿಕಾದ […]
↧