ಲಂಡನ್: ವಿದ್ಯಾರ್ಥಿಗಳು ಹಗಲಿನ ಶಾಲೆಯಲ್ಲಿ ಬಹುಬೇಗ ಆಯಾಸಗೊಳ್ಳಲು ತಡರಾತ್ರಿ ವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳುವುದೇ ಕಾರಣ ಎಂದು ಹೊಸ ಅಧ್ಯಯನ ಎಚ್ಚರಿಸಿದೆ. ವೇಲ್ಸ್ ಸಾಮಾಜಿಕ ಮತ್ತು ಆರ್ಥಿಕ ಸಂಶೋಧನಾ ಸಂಸ್ಥೆಯ ಸಂಶೋಧಕರ ಅಧ್ಯಯದ ಪ್ರಕಾರ, ಹುಡುಗರಿಗಿಂತಲೂ ಹುಡುಗಿಯರು ರಾತ್ರಿ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಐದು ವಿದ್ಯಾರ್ಥಿಗಳಲ್ಲಿ ಒಬ್ಬ ರಾತ್ರಿಯಲ್ಲಿ ಸಂದೇಶ ಕಳುಹಿಸಲು ಅಥವಾ ಗಮನಿಸುವುದರಲ್ಲಿ ಮುಳುಗಿರುತ್ತಾರೆ. ಹೀಗಾಗಿ, ರಾತ್ರಿ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಯುವ ವಿದ್ಯಾರ್ಥಿಗಳಿಗಿಂತ ಈ ವಿದ್ಯಾರ್ಥಿಗಳು ಮೂರು ಪಟ್ಟು ಹೆಚ್ಚು ಆಯಾಸಗೊಳ್ಳುತ್ತಾರೆ. […]
↧