ಬೀಜಿಂಗ್, ಮೇ 9: ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಚೀನಾದ ಪ್ರಪ್ರಥಮ ಗಾಂಧಿ ಅಧ್ಯಯನ ಕೇಂದ್ರವನ್ನು ಶಾಂಘಾಯಿಯ ುದಾನ್ ವಿಶ್ವವಿದ್ಯಾಲಯದಲ್ಲಿ ಉದ್ಘಾಟಿಸಲಿದ್ದಾರೆ. ಅವರು ಮೇ 14ರಿಂದ ಕೈಗೊಳ್ಳಲಿರುವ ತನ್ನ ಮೂರು ದಿನಗಳ ಚೀನಾ ಪ್ರವಾಸದ ವೇಳೆ ಆ ದೇಶದಲ್ಲಿ ಯೋಗ ಕಾಲೇಜೊಂದರ ಸ್ಥಾಪನೆಯನ್ನೂ ಘೋಷಿಸಲಿದ್ದಾರೆ. ಗಾಂಧಿ ಅಧ್ಯಯನ ಕೇಂದ್ರವನ್ನು ಚೀನಾದ ುದಾನ್ ವಿವಿಯಲ್ಲಿ ಸ್ಥಾಪಿಸಲಾಗುವುದು. ಅದಕ್ಕೆ ಬೇಕಾದ ಸಿಬ್ಬಂದಿಯನ್ನು ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ (ಐಸಿಸಿಆರ್) ಒದಗಿಸಲಿದೆಯೆಂದು ಅಕಾರಿಗಳಲ್ಲಿ ತಿಳಿಸಿದ್ದಾರೆ. ವಿವಿಯಲ್ಲಿ ಈಗಾಗಲೇ ಭಾರತೀಯ ಅಧ್ಯಯನಗಳ […]
↧