ನ್ಯೂಯಾರ್ಕ್: ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಅಪ್ಪ ಬೇರೆ ಬೇರೆಯಾಗಿದ್ದರೆ ಅದರಲ್ಲೇನು ವಿಶೇಷವಿಲ್ಲ ಬಿಡಿ. ಆದರೆ, ಮಕ್ಕಳು ಅವಳಿಯಾಗಿದ್ರೂ ಅಪ್ಪಂದಿರು ಇಬ್ಬರಾಗಿದ್ರೆ! ವಿಚಿತ್ರವೇ ಸರಿ. ಹೌದು, ಅಮೆರಿಕದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಸಾಕಷ್ಟು ಸುದ್ದಿ ಮಾಡಿದೆ. ಪಿತೃತ್ವಕ್ಕೆ ಸಂಬಂಧಿಸಿ ಮಹಿಳೆಯೊಬ್ಬರು ಹಾಕಿದ್ದ ದಾವೆ ವಿಚಾರಣೆ ವೇಳೆ ಈ ಅಚ್ಚರಿಯ ವಿಚಾರ ಬಹಿರಂಗಗೊಂಡಿದ್ದು, ಇದರಿಂದ ನ್ಯಾಯಾಲಯ ಕೂಡ ಐತಿಹಾಸಿಕ ತೀರ್ಪು ನೀಡುವಂತೆ ಮಾಡಿದೆ. ಆಗಿದ್ದೇನು? ನ್ಯೂಜೆರ್ಸಿಯ ಮಹಿಳೆಯೊಬ್ಬಳು ಜನವರಿ, 2013ರಂದು ಹುಟ್ಟಿದ ತನ್ನ ಅವಳಿ ಮಕ್ಕಳಿಗೆ ಆತ್ಮೀಯ […]
↧