ಲಂಡನ್(ಜ. 27): ದೇಹ ಸದಾ ಶುಚಿಯಲ್ಲಿಟ್ಟುಕೊಳ್ಳಬೇಕು; ನಿತ್ಯ ಸ್ನಾನ ಮಾಡಬೇಕು ಎಂದು ಹಿರಿಯರು ತಿಳಿವಳಿಕೆ ಹೇಳುವುದನ್ನು ಕೇಳಿರುತ್ತೇವೆ. ಆದರೆ, ಇಲ್ಲೊಂದು ಸಂಶೋಧನೆ ನಮ್ಮ ತಿಳಿವಳಿಕೆಗೆ ಟಾಂಗ್ ಕೊಡುವಂತೆ ಇದೆ. ಸ್ವಲ್ಪ ದಿನ ಸ್ನಾನ ಮಾಡದಿದ್ದರೆ ಅಬ್ಬಬ್ಬಾ ಅಂದ್ರೆ ಮೈ ವಾಸನೆ ಬರಬಹುದು. ಆದರೆ, ಅತಿಯಾಗಿ ಸ್ನಾನ ಮಾಡಿದರೆ ಅನೇಕ ಆರೋಗ್ಯ ತೊಂದರೆಗಳಿಗೆ ಎಡೆ ಸಿಕ್ಕಂತಾಗುತ್ತದೆ ಎಂದು ಉಟಾ ಯೂನಿವರ್ಸಿಟಿಯ ಸಂಶೋಧಕರು ಎಚ್ಚರಿಸಿದ್ದಾರೆ. ಸ್ನಾನ ಯಾಕೆ ಡೇಂಜರ್? ನಮ್ಮ ದೇಹದಲ್ಲಿ ಅಗತ್ಯವಾದ ಬ್ಯಾಕ್ಟೀರಿಯಾ, ವೈರಸ್ ಮತ್ತಿತರ ಮೈಕ್ರೋಬ್(ಜೀವಾಣು)ಗಳಿರುತ್ತವೆ. ಇವು […]
↧