ಸ್ಯಾನ್ ಫ್ರಾನ್ಸಿಸ್ಕೋ: ಖ್ಯಾತ ಸಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಬಳಕೆದಾರರ ಸಂಖ್ಯೆಯನ್ನು ಬರೊಬ್ಬರಿ 2 ಶತಕೋಟಿಗೇರಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಆ ಮೂಲಕ 2 ಶತಕೋಟಿ ಬಳಕೆದಾರರನ್ನು ಹೊಂದಿದ ವಿಶ್ವದ ಮೊದಲ ಸಾಮಾಜಿಕ ಜಾಲತಾಣ ಎಂಬ ಕೀರ್ತಿಗೂ ಫೇಸ್ ಬುಕ್ ಭಾಜನವಾಗಲಿದೆ. ಫೇಸ್ ಬುಕ್ ತ್ರೈಮಾಸಿಕ ವರದಿಯನ್ವಯ 2016ರ ವರ್ಷಾಂತ್ಯಕ್ಕೆ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಶೇ.10 ರಷ್ಟು ಏರಿಕೆಯಾಗಿದ್ದು, 2016ರ ವರ್ಷಾಂತ್ಯದ ವೇಳೆ ಪ್ರಕಟವಾದ ತ್ರೈಮಾಸಿಕ ವರದಿಯಲ್ಲಿ ಫೇಸ್ ಬುಕ್ 1.86 ಶತಕೋಟಿ ಬಳಕೆದಾರರನ್ನು ಹೊಂದಿತ್ತು. […]
↧