ಲಂಡನ್, ಮೇ 12: ಭಾರತೀಯ ಮೂಲದ ಸಂಸದೆ ಪ್ರೀತಿ ಪಟೇಲ್ ಅವರು ಬ್ರಿಟನ್ನ ಪ್ರಧಾನಿ ಡೇವಿಡ್ ಕ್ಯಾಮರೂನ್ರ ನೂತನ ಸಂಪುಟದಲ್ಲಿ ಉದ್ಯೋಗ ಸಚಿವೆಯಾಗಿ ನೇಮಕಗೊಂಡಿದ್ದಾರೆ. ಕಳೆದ ವಾರ ಬ್ರಿಟನ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಾರ್ಟಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರೀತಿ ಪಟೇಲ್(43) ಒಟ್ಟು 47,339 ಮತಗಳಲ್ಲಿ ಶೇಕಡಾ 57.5ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. 2014ರಲ್ಲಿ ನಡೆದ ಸಂಪುಟ ಬದಲಾವಣೆಯ ವೇಳೆ ಪ್ರೀತಿ ಪಟೇಲ್ ಅವರು ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 2010ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ನ ಎಸೆಕ್ಸ್ ಕೌಂಟಿ […]
↧