ವಾಷಿಂಗ್ಟನ್: 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ ವೈಯುಕ್ತಿಕ ದೂರವಾಣಿಯನ್ನು ಶನಿವಾರ ಅಮೆರಿಕದ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ. 1945ರಲ್ಲಿ ಹಿಟ್ಲರ್ ಪತನದ ಸಂದರ್ಭದಲ್ಲಿ ಆತ ಅವಿತಿದ್ದ ಬಂಕರ್ ನಿಂದ ಭದ್ರತಾ ಪಡೆಗಳು ಈ ದೂರವಾಣಿಯನ್ನು ವಶಪಡಿಸಿಕೊಂಡಿದ್ದವು. ಬಳಿಕ ಸುಮಾರು ವರ್ಷಗಳ ಇದನ್ನು ಭದ್ರತಾ ಪಡೆಗಳ ವಶದಲ್ಲಿಡಲಾಗಿತ್ತಾದರೂ ಬಳಿಕ ಅದನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಮೂಲತಃ ಕಪ್ಪುಬಣ್ಣದ ಟೆಲಿಫೋನ್ ಗೆ ಅಧಿಕಾರಿಗಳು ಹಿಟ್ಲರ್ ನ ರಕ್ತಪಿಪಾಸು ತನವನ್ನು ಸಾಂಕೇತಿಸುವ ಹಾಗೆ ಕೆಂಪುಬಣ್ಣವನ್ನು ಬಳಿದಿದ್ದರು. ಅಲ್ಲದೆ […]
↧