ಸ್ಯಾನ್ಫ್ರಾನ್ಸಿಸ್ಕೋ: ‘ಗೂಗಲ್ ಒಡೆತನದ ಆನ್ಲೈನ್ ವಿಡಿಯೊ ವೀಕ್ಷಣೆ ತಾಣ ಯುಟ್ಯೂಬ್ನಲ್ಲಿ ಪ್ರತಿ ನಿತ್ಯ ನೂರು ಕೋಟಿ ಗಂಟೆಗಳ ಕಾಲ ವಿಡಿಯೊ ವೀಕ್ಷಣೆಯಾಗುತ್ತಿದೆ. ಇದು ಸಂಸ್ಥೆಯ ದೊಡ್ಡ ಮೈಲುಗಲ್ಲು’ ಎಂದು ಯುಟ್ಯೂಬ್ ಹೇಳಿಕೊಂಡಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಯುಟ್ಯೂಬ್ನ ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಕ್ರಿಸ್ಟೋಸ್ ಗೋದ್ರೋವ್ ಮಾಹಿತಿ ಬಿತ್ತರಿಸಿದ್ದು, ‘ನೀವು ಈಗ ಕುಳಿತು ಅಷ್ಟು ಸಮಯ ಯುಟ್ಯೂಬ್ ವಿಡಿಯೋ ವೀಕ್ಷಿಸಲು ಶುರುಮಾಡಿದರೆ, ನಿಮಗೆ 1ಲಕ್ಷ ವರ್ಷಗಳ ಸಮಯ ಬೇಕಾಗುತ್ತದೆ’ ಎಂದು ಅವರು ಹೇಳಿಕೊಂಡಿದ್ದಾರೆ. ದೂರದರ್ಶನದ ಮೂಲಕ ವಿಡಿಯೊ ನೋಡುವವರು […]
↧