ಸುವಾ, ಫಿಜಿ (ಐಎಎನ್ಎಸ್): ಭಾರತ ಮತ್ತೆ ‘ವಿಶ್ವಗುರು’ ಪಾತ್ರ ನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ಪ್ರವಾಸದ ಅಂಗವಾಗಿ ಫಿಜಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, ಮನುಕುಲ ಒಳತಿಗೆ ಪ್ರಜಾಪ್ರಭುತ್ವ ಹಾಗೂ ಯುವ ಜನತೆಯ ಬಲವನ್ನು ಭಾರತ ಉಪಯೋಗಿಸಿಕೊಳ್ಳಲಿದೆ ಎಂದು ನುಡಿದರು. ಮುಂಬರುವ ದಿನಗಳು ಜ್ಞಾನ ಮತ್ತು ತಂತ್ರಜ್ಞಾನದ ಯುಗ ಎನಿಸಲಿದ್ದು, ಹೊಸ ಅನ್ವೇಷಣೆ ಹಾಗೂ ಶೋಧಗಳಲ್ಲಿ ವೇಗವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಮೋದಿ ಅವರು […]
↧