ಲಾಹೋರ್: ಜಮಾತ್-ಉದ್-ದವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆ ಹರಡುತ್ತಿದ್ದಾನೆ ಎಂದು ಸ್ವತಃ ಪಾಕಿಸ್ತಾನ ಸ್ಪಷ್ಟಪಡಿಸಿದೆ. ಹಫೀಜ್ ಸಯೀದ್ ಬಂಧನದ ಬಗ್ಗೆ ನ್ಯಾಯಾಂಗ ಸಮಿತಿಯೊಂದಕ್ಕೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನದ ಆಂತರಿಕ ಸಚಿವಾಲಯ, “ಕಾಶ್ಮೀರಿ ಪ್ರತ್ಯೇಕತಾವಾದಿಗಳ ಪರವಾಗಿ ಮಾತನಾಡಿದ್ದಕ್ಕೆ ನನ್ನನ್ನು ಬಂಧಿಸಲಾಗಿದೆ” ಎಂಬ ಆತನ ವಾದವನ್ನು ತಳ್ಳಿಹಾಕಿದ್ದು, ಆತ ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ. ಆದ್ದರಿಂದ ಬಂಧಿಸಲಾಗಿದೆ ಎಂದು ಹೇಳಿದೆ. ಲಾಹೋರ್ ಹೈಕೋರ್ಟ್ ನ ನ್ಯಾಯಾಧೀಶ ಹಾಗೂ ಬಲೂಚಿಸ್ತಾನ ಹೈಕೋರ್ಟ್ ನ ನ್ಯಾಯಾಧೀಶರಿದ್ದ ನ್ಯಾಯಾಂಗ […]
↧