ಇಸ್ಲಾಮಾಬಾದ್ (ಪಿಟಿಐ): ಭಾರತದ ಜೊತೆಗೆ ಶಾಂತಿ ಮಾತುಕತೆಯಲ್ಲಿ ತೊಡಗುವ ಮುನ್ನ ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಪಾಕಿಸ್ತಾನವು ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಗುರುವಾರ ಸ್ಪಷ್ಟ ಪಡಿಸಿದ್ದಾರೆ. ‘ಕಾಶ್ಮೀರ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದು ಎಂಬುದು ನಮ್ಮ ಮೂಲಭೂತ ನಂಬಿಕೆ. ನಮ್ಮ ಸರ್ಕಾರ ಭಾರತದೊಂದಿಗೆ ಮಾತುಕತೆ ಆರಂಭಿಸಿದೆ. ಆದರೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ನಿಗದಿತ ಮಾತುಕತೆಯನ್ನು ಭಾರತವು ರದ್ದುಗೊಳಿಸಿದೆ’ ಎಂದು ಪಾಕ್ ಆಕ್ರಮಿತ ಕಾಶ್ಮೀರ ರಾಜಧಾನಿ ಮುಜಫ್ಪರ್‌ಬಾದ್‌ನಲ್ಲಿ ಅವರು ತಿಳಿಸಿದ್ದಾರೆ. ‘ಭಾರತದೊಂದಿಗೆ ಮಾತುಕತೆ ಆರಂಭಿಸುವ […]
↧