ನ್ಯೂಯಾರ್ಕ್: ಶಸ್ತ್ರ ಚಿಕಿತ್ಸೆ ಮೂಲಕ ಮಿದುಳು ಗಡ್ಡೆ (ಬ್ರೈನ್ ಟ್ಯೂಮರ್) ಅನ್ನು ವೈದ್ಯರು ಹೊರ ತೆಗೆಯುವಾಗ ರೋಗಿಯೊಬ್ಬರು ಸ್ಯಾಕ್ಸೊಫೋನ್ ನುಡಿಸಿ ಅಚ್ಚರಿ ಮೂಡಿಸಿದ್ದಾರೆ. ರೋಚ್‌ಸ್ಟರ್ ವೈದ್ಯಕೀಯ ವಿಶ್ವವಿದ್ಯಾಲಯದ ಡೆಲ್ ಮಾಂಟೆ ನರವಿಜ್ಞಾನ ಸಂಸ್ಥೆಯ ವೈದ್ಯರು ಈ ಸಾಧನೆ ಮಾಡಿದವರು. ನ್ಯೂಯಾರ್ಕ್‌ನ ಸಂಗೀತ ಶಾಲೆಯಲ್ಲಿ ಶಿಕ್ಷಕರಾಗಿರುವ ಡ್ಯಾನ್ ಫ್ಯಾಬಿಯೊ ಶಸ್ತ್ರಚಿಕಿತ್ಸೆಗೊಳಗಾದವರು. ಗಡ್ಡೆ ಮಿದುಳಿನ ಬಹುಮುಖ್ಯ ಭಾಗದಲ್ಲಿ ಇತ್ತು. ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದಾದ ಇತರ ಜೀವಕೋಶಗಳಿಗೆ ಹಾನಿಯಾಗಿ, ಅದು ಮಿದುಳಿನ ಸಂವಹನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇತ್ತು’ […]
↧