ಥಾಯ್ಲೆಂಡ್ನ ಈ ಕಿಲಾಡಿ ಯುವತಿ ಮದುವೆಯಾಗಿರುವ ಪುರುಷರ ಸಂಖ್ಯೆ ಡಜನ್ಗೆ ಒಂದು ಕಮ್ಮಿ. ಅಂದರೆ ಹನ್ನೊಂದು! ಇಷ್ಟು ಜನರನ್ನು ವಿವಾಹವಾಗಲು ಈಕೆ ತೆಗೆದುಕೊಂಡ ಅವಧಿ ಕೇವಲ 2 ವರ್ಷ. ಅದರಲ್ಲೂ ಮೊನ್ನೆ ಆಗಸ್ಟ್ ತಿಂಗಳೊಂದರಲ್ಲೇ ಈ ಗಟ್ಟಿಗಿತ್ತಿ ನಾಲ್ಕು ಬಾರಿ ಮದುವೆಯಾಗಿದ್ದಾಳೆ. ಅಂದರೆ ವಾರಕ್ಕೊಂದು! ಅಲಲಾ… ಈಕೆಗೆ ಮದುವೆಯಾಗೋ ಚಟವಾ? ಚಟ ಇದೆ. ಆದರೆ ಮದ್ವೆ ಆಗೋದಲ್ಲ, ದುಡ್ಡು ಮಾಡೋದು. ಥಾಯ್ ಸಂಪ್ರದಾಯದಂತೆ ಈಕೆ ಒಬ್ಬೊಬ್ಬ ಪತಿಯಿಂದಲೂ 4 ಲಕ್ಷದಿಂದ 20 ಲಕ್ಷ ರೂ.ವರೆಗೆ ವಧುದಕ್ಷಿಣೆ ಪಡೆದಿದ್ದಾಳೆ. […]
↧