ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು ಆಯ್ಕೆ ಮಾಡುವ ವೈಶಿಷ್ಟ್ಯ ಲಭ್ಯವಾಗಲಿದೆ. ಬೀಟಾ ವರ್ಷನ್ ನಲ್ಲಿ ಈ ಆಯ್ಕೆಯನ್ನು ಪರಿಶೀಲನೆಗೊಳಪಡಿಸಲಾಗುತ್ತಿದ್ದು, ಗ್ರೂಪ್ ಮ್ಯಾನೇಜ್ಮೆಂಟ್ ಸುಧಾರಣೆಗೂ ಹೆಚ್ಚು ಒತ್ತು ನೀಡಲಿದೆ, ಗ್ರೂಪ್ ಆಡ್ಮಿನ್ ಗಳು ಗ್ರೂಪ್ ಕ್ರಿಯೇಟರ್ ಗಳನ್ನು ಡಿಲೀಟ್ ಮಾಡುವುದನ್ನು ತಡೆಯುವ ಸೌಲಭ್ಯವೂ ಇರಲಿದೆಯಂತೆ. ಇನ್ನು ಬಹು ನಿರೀಕ್ಷಿತ […]
↧