ಕೊಲಂಬೊ: ಶ್ರೀಲಂಕಾದ ಕೇಂದ್ರ ಭಾಗದ ಕ್ಯಾಂಡಿಯಲ್ಲಿ ಭೌದ್ಧರು ಮತ್ತು ಮುಸ್ಲಿಮರ ನಡುವಿನ ಕೋಮು ಘರ್ಷಣೆ ಹಿನ್ನೆಲೆಯಲ್ಲಿ ಮಂಗಳವಾರದಿಂದ 10 ದಿನಗಳ ಕಾಲ ಶ್ರೀಲಂಕಾ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ದೇಶದೆಲ್ಲೆಡೆ ಕೋಮು ಗಲಭೆಗಳು ಹಬ್ಬದಂತೆ ತಡೆಯುವ ಸಲುವಾಗಿ 10 ದಿನಗಳ ಕಾಲದ ತುರ್ತು ಪರಿಸ್ಥಿತಿ ಘೋಷಿಸಲು ವಿಶೇಷ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ, ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಕ್ತಾರ ದಯಾಸಿರಿ ಜಯಶೇಖರ ತಿಳಿಸಿದ್ದಾರೆ. ಕ್ರಿಕೆಟ್ ಸರಣಿಯಲ್ಲಿ […]
↧