ಮಾಸ್ಕೊ: ರಷ್ಯಾದ ವಿಮಾನವೊಂದು ಸಿರಿಯಾದಲ್ಲಿ ಪತನಗೊಂಡಿದ್ದು, 32 ಮಂದಿ ಮೃತಪಟ್ಟಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ತಾಂತ್ರಿಕ ಕಾರಣಗಳಿಂದ ವಿಮಾನ ಪತನಗೊಂಡಿರಬಹುದು ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಲತಾಕಿಯಾ ಪ್ರಾಂತ್ಯದಲ್ಲಿರುವ ಮೆಮಿನ್ ವಾಯು ನೆಲೆಯ ಸಮೀಪ ವಿಮಾನ ಪತನಗೊಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಈ ವಿಮಾನದಲ್ಲಿ 32 ಪ್ರಯಾಣಿಕರು ಹಾಗೂ 6 ವಿಮಾನ ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ.
↧