ಮುಂಬಯಿ: ಬಹುನಿರೀಕ್ಷಿತ ಬ್ರಿಟಿಷ್ ರಾಯಲ್ ವೆಡ್ಡಿಂಗ್ ದಿನಾಂಕ ಸಮೀಪಿಸುತ್ತಿದ್ದು ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಗಾನ್ ಮಾರ್ಕಲ್ ಸದ್ಯದಲ್ಲಿಯೇ ಸತಿಪತಿಗಳಾಗಿ ಹೊಸಜೀವನಕ್ಕೆ ಕಾಲಿಡಲಿದ್ದಾರೆ. ವಿಶ್ವದ ಪ್ರತಿಷ್ಠಿತರನ್ನು ಮದುವೆಗೆ ಬರುವಂತೆ ಆಮಂತ್ರಿಸಲಾಗಿದ್ದು ದೇಶವಿದೇಶಗಳಿಂದ ಉಡುಗೊರೆಗಳು ಹರಿದು ಬರುತ್ತಿವೆ. ಯುವರಾಜನ ಮದುವೆಗೆ ಉಡುಗೊರೆಯಾಗಿ ಭಾರತದಿಂದ ಕಳುಹಿಸಲಾಗುತ್ತಿರುವ ಉಡುಗೊರೆಯೊಂದು ವಿಶ್ವದ ಗಮನ ಸೆಳೆದಿದ್ದು ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದೆ. ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವ ಪೇಟಾ ಪ್ರಿನ್ಸ್ ಹ್ಯಾರಿ ಮದುವೆಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸುತ್ತಿದೆ. ಅದು ಮೆರ್ರಿ ಎಂಬ ಹೆಸರಿನ ಹೈಬ್ರಿಡ್ […]
↧