ನ್ಯೂಯಾರ್ಕ್: ಅಮೆರಿಕದ ಸಿಐಎ ತನ್ನ ಇತ್ತೀಚಿಗಿನ ವರ್ಲ್ಡ್ ಫ್ಯಾಕ್ಟ್ ಬುಕ್ ಸಂಚಿಕೆಯಲ್ಲಿ ವಿಶ್ವಹಿಂದು ಪರಿಷದ್ ಮತ್ತು ಬಜರಂಗದಳವನ್ನು ಧಾರ್ಮಿಕ ಉಗ್ರ ಸಂಘಟನೆಗಳು ಎಂದು ಬಿಂಬಿಸಿದೆ. ವಿಎಚ್‌ಪಿ ಮತ್ತು ಬಜರಂಗದಳ ರಾಜಕೀಯದಲ್ಲಿ ತೊಡಗುವ ಅಥವಾ ರಾಜಕೀಯ ಒತ್ತಡವನ್ನು ಉಂಟುಮಾಡುವ ಸಂಘಟನೆಗಳು ಆದರೆ ಅದರ ನಾಯಕರು ಶಾಸಕಾಂಗ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಅಮೆರಿಕ ಸರ್ಕಾರದ ಗುಪ್ತಚರ ವಿಭಾಗದ ಸಂಸ್ಥೆಯಾಗಿರುವ ಸಿಐಎ ಹೇಳಿದೆ. ಆರ್‌ಎಸ್‌ಎಸ್ ನ್ನು ರಾಷ್ಟ್ರೀಯತೆ ಬಿಂಬಿಸುವ ಸಂಘಟನೆ ಎಂದಿದೆ, ಆದರೆ ರಾಜಕೀಯ ಒತ್ತಡವನ್ನು ತರುವಲ್ಲಿ ಪಾತ್ರವಹಿಸುತ್ತದೆ ಎಂದು ಬರೆದಿದೆ. […]
↧