ಇಸ್ಲಮಾಬಾದ್: ಪಾಕಿಸ್ತಾನದ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾಗೆ ಅಲ್ಲಿನ ಗುರುದ್ವಾರಾವೊಂದಕ್ಕೆ ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದೆ. ರಾವಲ್ಪಿಂಡಿ ಬಳಿಯ ಹಸನ್ ಅಬ್ದಲ್‌ನಲ್ಲಿರುವ ಗುರುದ್ವಾರ ಪಂಜಾ ಸಾಹಿಬ್‌ಗೆ ಭೇಟಿ ನೀಡಲು ಮುಂಚಿತವಾಗಿಯೇ ಅನುಮತಿ ಪಡೆದುಕೊಂಡಿದ್ದರೂ ಸಹ ನಿರಾಕರಿಸಲಾಗಿದೆ ಎಂದು ಭಾರತದ ಅಧಿಕಾರಿಗಳು ಪಾಕ್ ವಿರುದ್ಧ ಆರೋಪಿಸಿದ್ದಾರೆ. ಭಾರತದ ಹೈ ಕಮೀಷನರ್ ಅಜಯ್ ಬಿಸಾರಿಯಾ ಜತೆಗೆ ಅವರ ಪತ್ನಿ ಸಹ ಗುರುದ್ವಾರಕ್ಕೆ ತೆರಳಿದ್ದರು. ಆದರೆ, ಅನುಮತಿ ನಿರಾಕರಿಸಿದ ಕಾರಣ ಅವರಿಬ್ಬರೂ ಇಸ್ಲಮಾಬಾದ್‌ಗೆ ಮರಳಬೇಕಾಯಿತು ಎಂದು ಭಾರತದ ಅಧಿಕಾರಿಗಳು ಹೇಳಿದ್ದು, […]
↧