ವಾಷಿಂಗ್ಟನ್: ಇರಾನ್ ನಿಂದ ನವೆಂಬರ್ ವೇಳೆಗೆ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ಅಮೆರಿಕಾ ಕರೆ ನೀಡಿದೆ. ಇರಾನ್ ನ ತೈಲ ಕಂಪೆನಿಗಳ ಮೇಲೆ ನವೆಂಬರ್ 4ರ ಹೊತ್ತಿಗೆ ಭಾರತ, ಚೀನಾ ಸೇರಿದಂತೆ ಎಲ್ಲಾ ದೇಶಗಳು ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಹೇಳಿರುವುದಾಗಿ ಅಮೆರಿಕಾ ಸರ್ಕಾರದ ಇಲಾಖೆ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಹಿಂದೆ ಬೇರೆ ದೇಶಗಳಿಗೆ ಅಮೆರಿಕಾ ಇರಾನ್ ನಿಂದ ತೈಲ ಆಮದಿಗೆ ದಿಗ್ಭಂದನ ಹೇರಿತ್ತು. ಈಗಿನಿಂದಲೇ ಭಾರತ ಸೇರಿದಂತೆ […]
↧