ವಾಷಿಂಗ್ಟನ್ : ವಿಶ್ವ ಪ್ರಸಿದ್ಧ ಮೆಕ್ಡೊನಾಲ್ಡ್ ನ ಅಮೆರಿಕದ ಹತ್ತು ರಾಜ್ಯಗಳಲ್ಲಿ ಹರಡಿಕೊಂಡಿರುವ ರೆಸ್ಟೋರೆಂಟ್ಗಳಲ್ಲಿ ಸಲಾಡ್ ತಿಂದ ಸುಮಾರು 163 ಮಂದಿ ಅಸ್ವಸ್ಥರಾಗಿದ್ದಾರೆ. ಆದರೆ ಯಾರೂ ಮೃತಪಟ್ಟ ವರದಿಗಳಿಲ್ಲ. ಘಟನೆಯನ್ನು ಅನುಸರಿಸಿ ಅಮೆರಿಕದ ಆರೋಗ್ಯ ಅಧಿಕಾರಿಗಳು ಮೆಕ್ ಡೊನಾಲ್ಡ್ ನ ಸಲಾಡ್ ತಿಂದವರಲ್ಲಿ ಕಂಡು ಬಂದಿರುವ ಸೈಕ್ಲೋಸ್ಪೋರಿಯಾಸಿಸ್ ಎಂಬ ಕಾಯಿಲೆಗೆ ಕಾರಣವಾಗಿರುವ ಯಾವ ವಸ್ತು ಸಲಾಡ್ನಲ್ಲಿದೆ ಎಂಬುದರ ವೈಜ್ಞಾನನಿಕ ಪರೀಕ್ಷೆ ನಡೆಸುತ್ತಿದ್ದಾರೆ. ಅಂತೆಯೇ ಘಟನೆಯ ಬಗ್ಗೆ ಕೂಲಂಕಷ ತನಿಖೆ ಈಗ ಪ್ರಗತಿಯಲ್ಲಿದೆ. ಈ ವೈಜ್ಞಾನನಿಕ ಪರೀಕ್ಷೆಗೆ ಅಮೆರಿಕದ […]
↧